ಮನದಲ್ಲಿ ನೂರು ಯೋಚನೆಗಳಿವೆ
ಕೊನೆಯೆಂದೋ ಬೇಸತ್ತಿದ್ದೇನೆ
ಹೊಸತನ ಹುಡುಕುವ ತವಕ ಒಂದು ಕಡೆ
ಕಾಣದ ಬೇಸರಕ್ಕೆ ಮನ ಮುದುಡುತ್ತಿದೆ ಮತ್ತೊಂದು ಕಡೆ
ಹೆಣಗಬೇಕು, ಸೊರಗಬೇಕು ಮತ್ತೆ ಮತ್ತೆ ಅಲ್ಲೇ ಕೊಳೆತು ನಾರುತ್ತಾ...
ಹೊಸಬರು ನಮ್ಮ ಸ್ಥಾನವನ್ನು ತುಂಬುವುದನ್ನು ನೋಡಿ
ಮನದಲ್ಲೇ ಕೊರಗುತ್ತಿದ್ದೇವೆ;ನಮಗಿಲ್ಲದ ಅವಕಾಶ ಹೊರಗಡೆಯಿಂದ ಬಂದವನಿಗೆ ಸಿಗುತ್ತಿರುವುದಕ್ಕೆ
ಹೊಟ್ಟೆಯಲ್ಲಿ ಕಿರುಕುಳ ಶುರುವಾಗಿದೆ;
ನಮ್ಮ ಅವಕಾಶಗಳನ್ನು ಅವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನಲೋ!
ಇಲ್ಲ ನಮ್ಮವರೇ ನಮಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎನ್ನಲೋ!
ಇಲ್ಲ ನಿಮಗ್ಯಾರಿಗೂ ಯೋಗ್ಯತೆಯಿಲ್ಲವೆನ್ನುವ ಸಂದೇಶವೋ?
ಒಂದೂ ತಿಳಿಯದಾಗಿದೆ;
ಮೌನವೇ ಮಾತಾಗಿದೆ;
ಮನದಲ್ಲೇ ಅಸಹನೆಯ ಜ್ವಾಲಾಮುಖಿ ಒಳಗೊಳಗೇ ಕುದಿಯುತ್ತಿದೆ
No comments:
Post a Comment