ಸತ್ಯದ ದಾರಿ


ಹತ್ತು- ಹಲವಾರು ಸತ್ಯದ ದಾರಿಗಳಿವೆ;
ಈ ಸತ್ಯ ಎಲ್ಲರಿಗೂ ಗೊತ್ತು;
ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆ
ಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;
ನಾನು ಸತ್ಯ;
ನೀನು ಸತ್ಯ;
ರಾಮ ಸತ್ಯ;
ರಹೀಮ ಸತ್ಯ;
ಕ್ರಿಸ್ತ ಸತ್ಯ;
ಬಸವಣ್ಣ,ಬುದ್ಧ,ಮಹಾವೀರನೂ ಸತ್ಯ;
ವಿಜ್ಯಾನ,ಅಧ್ಯಾತ್ಮ ,ಹತ್ತು ಹಲವು ಸತ್ಯಗಳು
ಅವರವರಿಗೆ ಗೋಚರಿಸಿದ್ದು,ಪ್ರೇರಣೆಯಾಗಿದ್ದು ಸತ್ಯವೇ
ಅಲ್ಲಗೆಳದವರು ಯಾರು?
ನನ್ನಲ್ಲಿ ನಿನ್ನನ್ನು ಕಾಣದವ;
ರಾಮನಲ್ಲಿ ರಹೀಮನ ಕಾಣದವ;
ರಹೀಮನಲ್ಲಿ ರಾಮ,ಕ್ರಿಸ್ತ,ಬುದ್ಧ,ಬಸವನ ಕಾಣದವ;
ಅಂತಹವನ ಆಲೋಚನೆಗಳು ಹೇಗೆ ಸತ್ಯವಾದಾವು?
ಎಲ್ಲಾ ತತ್ವಗಳಲ್ಲಿ,ಧರ್ಮಗಳಲ್ಲಿ ಮಾನವೀಯತೆ ಮರೆಯಾದರೆ ಅದು ಸತ್ಯ ಹೇಗಾದೀತು?
ಎಲ್ಲಾ ಸತ್ಯಗಳು ಸುಕ್ಕುಗಟ್ಟಿದ ದಾರದಂತೆ;
ಒಳ ಸುಳಿಗಳ ದಾರಿಯಂತೆ;
ಎಲ್ಲೋ ಒಂದು ಕಡೆ ಎಲ್ಲವೂ ಸೇರಲೇಬೇಕು;
ಅದನ್ನು ಹುಡುಕುವವನೇ ನಿಜವಾದ ಅನ್ವೇಷಕ;
ಆ ದಾರಿಯೇ ಎಲ್ಲರಿಗೂ ಬೇಕಾಗಿದೆ;
ಅದೇ ನಿಜವಾದ ಸತ್ಯದ ದಾರಿ.

2 comments:

  1. ಅಂತ ಅನ್ವೇಷಕ ಸಿಗಲೆಂದು ಹಾರೈಸೋಣ.
    ಹುಡುಕಲು ನಾವೂ ಪ್ರಯತ್ನಿಸಬಹುದು.
    ಸ್ವರ್ಣಾ

    ReplyDelete
  2. ಹೌದು! ಎಲ್ಲರ ಪ್ರಯತ್ನವೂ ಅದೇ ಆಗಿದೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...