ಮುಖವಾಡ


ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತು
ಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;
ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;
ಬಾಳು ಸಾಗಲೇಬೇಕು ಭರವಸೆಯಿಂದ ನಾಳೆಯ ಕಡೆಗೆ; ಮುಖವಾಡಗಳು,ಪೊಳ್ಳು ಆದರ್ಶಗಳು ನಮಗಾಗಿಯೇ ಬಹಳಷ್ಟಿದೆ ಬದುಕಿಗೆ;

ಹತ್ತು ಮುಖಗಳು;
ಹತ್ತು ಮುಖವಾಡಗಳು;
ನೂರು ದಾರಿಗಳು;
ಎಲ್ಲವನ್ನೂ ಅರಿಯಬೇಕು,ನಮ್ಮ ದಾರಿಯನ್ನು ನಾವೇ ಆರಿಸಿಕೊಳ್ಳಬೇಕು;

ತಪ್ಪು-ಒಪ್ಪುಗಳು;
ಸತ್ಯ-ಅಸತ್ಯಗಳು;
ನೂರು ದಾರಿದೀಪಗಳು;
ಎಲ್ಲವೂ ತಿಳಿದಿದೆ, ಅದರೂ ತಪ್ಪುಹೆಜ್ಜೆಯಿಡುತ್ತೇವೆ ನಮ್ಮ ಗುರಿ ಮುಟ್ಟಲು;

ನಗಬೇಕು ಎದುರುಬಂದವರಿಗೆ
ಮನದೊಳಗೆ ಅಸಹ್ಯ ಕೋಪ-ದ್ವೇಷವಿದ್ದರೂ
ನಮ್ಮ ಬೇಳೆ ಬೇಯಬೇಕಲ್ಲ, ನಮಗೆ ನಾವೇ ಮುಖವಾಡಗಳನ್ನ ತೊಡಿಸಿಕೊಂಡು
ದಿನವೂ ಒಂದೊಂದು ಮುಖವಾಡ, ನಿಜವಾದ ಮುಖವಾವುದೆಂದು ನಮಗೇ ಮರೆತಿದೆ,ನಿಜ ಮುಖ ನಮಗೇ ಬೇಕಿಲ್ಲ!;

ಎಲ್ಲವೂ ನಮಗಾಗಿ
ಎಲ್ಲವೂ ಪೈಪೋಟಿಗಾಗಿ
ಎಲ್ಲರಿಗೂ ನಾವೇ ಶ್ರೇಷ್ಠವೆಂದು ತೋರಿಸುವುದಕ್ಕಾಗಿ
ನಮ್ಮ ಅಧಃಪತನ ನಮ್ಮಿಂದಲೇ ಎಂಬುದ ನಾವು ಮರೆತಿದ್ದೇವೆ, ಆದರೂ ಹೊಡೆದಾಡುತ್ತೇವೆ ಸಾಯಲು;

ಎಲ್ಲವನ್ನು ಕಂಡು ನಗುಬರುವುದು
ಕನ್ನಡಿಯ ಮುಂದೆ ನಮ್ಮದೇ ಮುಖವಾಡ ಕಳಚುವುದು
ಹೆದರಿಕೆ ಇದೆ, ನಮ್ಮತನವನ್ನು ನಾವು ಮಾರಾಟ ಮಾಡಿಬಿಟ್ಟಿದ್ದೇವೆಂದು
ಅದರೂ ಪೊಳ್ಳು ಆದರ್ಶಗಳನ್ನು ಬಿಡುವುದಿಲ್ಲ, ಅದರಲ್ಲೇ ನಮ್ಮ ಸುಖವಿದೆ ಎಂಬ ಪರದೆ ಕಳಚಿದರೂ ನಾವು ಬಿಡುವುದಿಲ್ಲ.
ಮುಖವಾಡವಿಲ್ಲದೆ ನಾವು ಬದುಕಲು ಸಾಧ್ಯವೇ?

2 comments:

  1. ಚೆನ್ನಾಗಿದೆ.
    ಮುಖವಾಡವಿಲ್ಲದ ಬದುಕು ಕಷ್ಟ ಕಷ್ಟ
    swarna

    ReplyDelete
  2. ಸ್ವರ್ಣ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಧುನಿಕ ಈ ಯುಗದಲ್ಲಿ ಮುಖವಾಡಗಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಅನ್ನುವ ಮಟ್ಟಿಗೆ ನಾವು ನಮ್ಮತನವನ್ನು ಬದಲಾಯಿಸಿಕೊಂಡಿದ್ದೇವೆ.ಕ್ಷಣಕ್ಕೊಂದು ಮುಖವಾಡ ನಮಗೆ ಬೇಕೇಬೇಕು.ಸ್ವಲ್ಪವಾದರೂ ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾತ್ರ ನಾವು ಮಾಡಲೇಬೇಕು.

    ReplyDelete

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...