Sunday, May 17, 2026

ಸ್ಥಿರತೆ - ಚಲನೆ

ಇಲ್ಲಿ ಎಲ್ಲವೂ ಚಲಿಸುತ್ತಿದೆ, 

ನಾವು ಮಾತ್ರ ನಿಂತಿದ್ದೇವೆ.

ಆಲೋಚನೆಗಳು ಹರಿಯುತ್ತಿವೆ,

ಸಾಗರದ ಅಲೆಗಳು ಎಂದೂ ನಿಲ್ಲದು.


ಕಾಲವೂ ಕ್ಷಣವೂ ನಿಲ್ಲದೆ ಓಡಿದೆ,

ಭೂಮಿಯೂ ತಿರುಗುತ್ತಲೇ ಇದೆ.

ಬೆಟ್ಟ ಪರ್ವತಗಳು ನಿಂತಲ್ಲೇ ನಿಂತಿವೆ,

ಆದರೂ, ಅವು ನಿರಂತರವಾಗಿ ಕರಗುತ್ತಿವೆ.


ಮನದಲ್ಲಿ ಸ್ಥಿರತೆ ಇಲ್ಲ,

ಯೋಚನೆಗಳಲ್ಲಿ ಏಕಾಗ್ರತೆ ಇಲ್ಲ.

ಅಲೆದಾಡುವ ಮನಕ್ಕೆ ಹಿಡಿತವಿಲ್ಲ,

ಹಿಡಿತವಿಲ್ಲದೆ ಸಾಧನೆ ಶೂನ್ಯ. 


ಹಿಡಿತ ಸಾಧಿಸೆ ಮನವು ಶಾಂತ,

ಶಾಂತ ಮನಸ್ಸೇ ಬೆಳಕಿಂಡಿ.

ಬೆಳಕ ಹಾದಿಯ ಹೆಜ್ಜೆ ಹೆಜ್ಜೆಗೂಡಿ,

ಸಾಧನೆಯ ಹೆದ್ದಾರಿ ತೆರೆವುದು ಹಾಡಿ.  

No comments:

Post a Comment

ಸ್ಥಿರತೆ - ಚಲನೆ

ಇಲ್ಲಿ ಎಲ್ಲವೂ ಚಲಿಸುತ್ತಿದೆ,  ನಾವು ಮಾತ್ರ ನಿಂತಿದ್ದೇವೆ. ಆಲೋಚನೆಗಳು ಹರಿಯುತ್ತಿವೆ, ಸಾಗರದ ಅಲೆಗಳು ಎಂದೂ ನಿಲ್ಲದು. ಕಾಲವೂ ಕ್ಷಣವೂ ನಿಲ್ಲದೆ ಓಡಿದೆ, ಭೂಮಿಯೂ ತಿರು...