Thursday, October 2, 2014

ಹಾರೈಕೆ

ಬೆನ್ನು ತಟ್ಟದ ಜನ,
ಮೇಲೇರಲು ಬಿಡದೆ ಕಾಲೆಳವ ಜನ,
ಬಿದ್ದಾಗ ನಗುವ ಜನ
ಹಿಂದೆ.ಮುಂದೆಲ್ಲವೂ ಇಂತಹ ಜನರ ಸಂತೆಯಲ್ಲಿ
ಒಂಟಿ ಪಯಣಿಗರು ನಾವು
ನೂರು ಕನಸ ಮೂಟೆ ಹೊತ್ತು
ಹೊರಟಿಹೆವು ನನಸಾಗಿಸುವ ದಾರಿ ಹಿಡಿದು
ನಮ್ಮ ನೋವು,ನಮ್ಮ ನಲಿವು
ಏನೇ ಆದರೂ ಹಂಚುವೆವು ಸ್ನೇಹದ ಸಿಹಿ
ನಮ್ಮ ಬಾಳಿಗೆ ಬರಲಿ ನೋವುಗಳ ಕಹಿ
ಅನುಭವಿಸುವ ಶಕ್ತಿ ನಿಮ್ಮ ಹಾರೈಕೆಯಲ್ಲಿರಲಿ||

ಕದನ

ಮನದೊಳಗೆ ನೂರು ಕದನ
ನಿಲ್ಲದ ಹೋರಾಟ ಅಂತ್ಯವೆಂದೋ?
ಹಿಂಸೆ,ನೋವು ಇಲ್ಲದ ಜಗವುಂಟೇ
ಮನದೊಳು ನಡೆವ ಈ ಕದನ ನಿರಂತರ||

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...