ಸಂಕೇತ


ನೂರಾರು ಸಂಕೇತಗಳು,ಸಂಜ್ಞೆಗಳು
ಅರ್ಥವಾಗದ ಭಾಷೆಗಳು
ಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;
ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆ
ಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;
ನಮ್ಮ ಅರಿವೇ ಶ್ರೇಷ್ಠ;
ನಾವೇ ಶ್ರೇಷ್ಠ;
ಅಹಂಮಿನ ಸಾರೋಟದಲ್ಲಿ
ತಪ್ಪು ಭಾವನೆಗಳು ಮೇಳೈಸಿವೆ ದಿಗಂತದೆತ್ತರಕ್ಕೆ
ಹೊಸ ಹೊಸ ವಿಮರ್ಶೆಗಳ ದಾರಿ ತೆರೆದುಕೊಂಡಿದೆ;
ಸ್ಥಿತಿ-ಪರಿಸ್ಥಿತಿಗಳು ಬದಲಾಗುತ್ತಿದೆ ಗೋಚರಿಸದೇ...
ಮನಸ್ಸುಗಳೂ ಕೂಡ ಅರ್ಥವಾಗದ ಹಾಗೆ
ನಮಗೆ ಗೊತ್ತು ಬರೀ ಬಾಹ್ಯ ಬೇಕು-ಬೇಡಗಳು ಮಾತ್ರ
ಅಂತರಂಗದ ಬೇಕು-ಬೇಡಗಳು ಯಾರಿಗೆ ಗೊತ್ತು?
ಅದು ಯಾರಿಗೂ ಬೇಡ!;
ಪ್ರೀತಿ ಬೆತ್ತಲಾಗಿದೆ ಕತ್ತಲಲ್ಲಿ;
ದ್ವೇಷ ಮೇಳೈಸಿದೆ ಬೆಳಕು-ಕತ್ತಲೆನ್ನದೆ;
ಮನಸ್ಸು ಸಂಕುಚಿತಗೊಂಡಿದೆ ವ್ಯಾಮೋಹಗಳಿಂದ;
ನಿರ್ಲಿಪ್ತತೆ ಅರ್ಥಕಳೆದುಕೊಂಡಿದೆ;
ಪ್ರಕೃತಿ ತನ್ನ ಪಾಡಿಗೆ ತಾನು ಸಂಕೇತಗಳನ್ನು ಕೊಡುತ್ತಲೇ ಇದೆ;
ನಾವು ಮಾತ್ರ ಅರ್ಥಮಾಡಿಕೊಂದಿದ್ದೇವೆ ಬೇರೆಯದೇ ರೀತಿಯಲ್ಲಿ;
ಪ್ರಕೃತಿ ಸೊರಗುತ್ತಿದೆ ಸಂಕೇತ,ಸಂಜ್ಞೆಗಳನ್ನು ತೋರಿಸುತ್ತಾ.......

2 comments:

  1. ತುಂಬಾ ಇಷ್ಟ ಆಯಿತು.
    ಸಂಜ್ಞೆಗಳನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಬರಲೆಂದು ಹಾರೈಸೋಣ
    ಸ್ವರ್ಣಾ

    ReplyDelete
  2. ಸ್ವರ್ಣರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...