ಎಲ್ಲಿ ಹೋದೆ ನಾ ನಿನ್ನ ಅರಸುತಿಹೆ,
ಬಂದೆ
ಎಂದು ಓಡಿ ಬರುವೆ,
ಮನೆಯ
ಆವರಣ 'ಹನಿ'ಸದೆ ಓಡುವೆ,
ಮನೆಯ
ಬಾಗಿಲ ತೆರೆದು ಕಾದಿಹೆ,
ಗಾಳಿ
ಗೆಳೆಯನ ಕೂಡಿ ಮಾಯವಾಗುವೆ,
ಏಕಿನಂತ
ಸಿಟ್ಟು, ಸೊಡರು,
ನಿನ್ನ
'ಗುಟುರು' ಕೇಳಿ ವರ್ಷವಾಗಿದೆ,
ಬರುವೆ
ಎಂಬ ಭರವಸೆ ಹಸಿರಾಗಿದೆ,
ಬಾ
ಗೆಳೆಯನೇ ಬಾ, ತಂಪಾಗಿಸು ಬಾ,
ಭೂ
ತಾಯಿಯ ಮಡಿಲ ಹಸಿರಾಗಿಸು ಬಾ.

No comments:
Post a Comment