Tuesday, March 3, 2026

ತಾಳ್ಮೆಯ ಪಯಣ

ಮನವು ಬಯಸಿದೆ,

ಶಾಂತ ಕ್ಷಣಗಳ,


ತಂಗಾಳಿಯ ಸುಂದರ ಕ್ಷಣಗಳ.

ಭಯ,ಆತಂಕ, ಅವಸರಗಳಿಂದ ಬಲು ದೂರ,

ಜನ ವಿಚಿತ್ರವಾಗಿ ನೋಡುವರು ನನ್ನ.

 

ಜಗತ್ತು ಆತುರದಲ್ಲಿದೆ,

ಎಲ್ಲವೂ ಕ್ಷಣಗಳಲ್ಲಿ ಆಗಬೇಕೆನ್ನುವರು,

ಸೃಷ್ಟಿಯ ನಿಯಮಗಳನ್ನೂ ಬದಲಿಸಬೇಕೆನ್ನುವರು,

ರಾಕೆಟ್ ಯುಗದಲ್ಲಿ ರಾಕೆಟ್ ಮೇಲೇ ಪಯಣಿಸುವರು,

ನಾನು ತಣ್ಣಗಿದ್ದೇನೆ, ತಾಳ್ಮೆಯನ್ನೇ ಆಯ್ದುಕೊಂಡೆನು. 


Monday, March 2, 2026

ಮುಂದಿನ ಹಾದಿ

ನೂರು ಆಗಿ ಹೋಗಿದೆ,

ಏನು ಕಲಿತೆ ಅದರಿಂದ?.

ನೂರು ಆಗುವುದಿದೆ ಮುಂದೆ,

ಏನು ಮಾಡುವೆ ಕಲಿತದ್ದರಿಂದ?

ಬೇಡದ ವಿಷಯಗಳ ಹೊರೆ ಹೊರಬೇಡ,

ಬಾರವಿರೆ ಕಷ್ಟ ಮುಂದೆ ಸಾಗಲು.

ಹಗುರಾಗಿಸಿಕೊ!,

ಬೇಡದ್ದನ್ನು ತೊಳೆದುಕೋ!,

ಬೇಕು, ಬೇಡಗಳ ವಿವೇಚಿಸು,

ಮನವ ತಿಳಿಯಾಗಿಸು,

ಶಾಂತಿಯ ಕಡಲಾಗಿಸು.


ತಾಳ್ಮೆಯ ಪಯಣ

ಮನವು ಬಯಸಿದೆ , ಶಾಂತ ಕ್ಷಣಗಳ , ತಂಗಾಳಿಯ ಸುಂದರ ಕ್ಷಣಗಳ . ಭಯ , ಆತಂಕ , ಅವಸರಗಳಿಂದ ಬಲು ದೂರ , ಈ ಜನ ವಿಚಿತ್ರವಾಗಿ ನೋಡುವರು ನನ್ನ .   ಜ...