ಬಯಕೆ

ಹುಣ್ಣಿಮೆಯ ಬೆಳಕಲ್ಲಿ ತಾರೆಯರೊಡನೆ
ನೀನಿರಬೇಕೆಂದು ಬಯಸುವೆ
ಒಂದು ದಿನ ನಿನ್ನ ಬಾಹುಬಂದನದ ಬಿಸಿಯಪ್ಪುಗೆಯ ಪರಿಭಾವಿಸುವೆ
ಮತ್ತೆಂದೂ ಕಣ್ಣೀರು ಈ ಕಂಗಳಿಂದ ಸುರಿಯಲಾರವು||

ಪ್ರೇರಣೆ: Kari Johnston.

ಹಣೆಯ ಬರಹ

ಹಣೆಯ ಮೇಲೆ ನೂರೆಂಟು ಬರೆದಿಹನಂತೆ
ಆ ಬ್ರಹ್ಮ ಕಾಣದ ಅಕ್ಷರಗಳಿಂದ
ಸೋಲುಗಳು ನಮ್ಮನಾವರಿಸಿದಾಗ
ಎಲ್ಲರೂ ಹೇಳುವರು ತಾವೇ ಬರೆದವರಂತೆ
ಅದೇ ಗೆಲುವಿನ ನಗೆ ಬೀರಿದಾಗ
ಅದೃಷ್ಟವೇ ಅವನ ಕೈ ಹಿಡಿಯಿತೆನ್ನುವರು ಬೆನ್ನ ಹಿಂದೆ
ಪಟ್ಟ ನೋವು,ಶ್ರಮ,ದೃಡಚಿತ್ತ ಕಂಡೂ ಕಾಣದ ಹಾಗೆ||

ಕೊಳಲನೂದು ಮಾಧವಾ

ಕೊಳಲನೂದು ಮಾಧವಾ
ಮನದ ಕೊಳೆಯ ಕಳೆಯೋ ಕೇಶವಾ
ನಿನ್ನ ಕಾಣದ ಕಂಗಳ ಕತ್ತಲ ಕಖೆಯೋ ಗೋಪಾಲಾ
ಮುರಳಿಯ ನಾದ ಮನವ ನಡೆಸಲು
ಕೊಳಲನೂದು ರಾಧಾಮಾಧವಾ||

ಗೆಳೆತನ

ಇಂದೇಕೋ ಮನದಲ್ಲಿ ಪುಳಕ
ಎಂದೂ ಕಾಣದ ಚೈತನ್ಯದ ಬೆಳಕು
ಕಾರಣ ಹುಡುಕುತ್ತಾ ಅನ್ವೇಷಿಯಾದೆ
ಉತ್ತರ ಕಂಡುಕೊಂಡೆ.....
ಏನು ಗೊತ್ತಾ?....
ಗೆಳೆಯರೆ ನೀವೆಲ್ಲಾ ನನ್ನ ಜೊತೆಗಿದ್ದೀರಿ....
ಗೆಳೆತನಕ್ಕೆ ಎಣೆಯುಂಟೇ?.....

ಕಾಣದ ದಾರಿ

ಬೇರೆ ದಾರಿ ಇಲ್ಲದೆ ಹೃದಯ ಕರೆದ ಕಡೆ ಹೊರಳಿದೆ
ಕಣ್ಣಿಗೆ ಕಾಣುವ ದಾರಿ ಕತ್ತಲಲ್ಲಿ ಬೆತ್ತಲಾಗಿ ನರಳಿದೆ
ಮನಸ್ಸು ಯಾವ ಕಡೆಯೂ ಹೊರಳಲಾರದೆ ತೊಳಲಿದೆ
ಎತ್ತಲೋ ಸಾಗಿ ಶಾಂತಿಯ ಅರಸುತ್ತಾ ಅಲೆದಿದೆ||

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...