'ಅಭ್ಯಾಸ' 'ಹವ್ಯಾಸ'ವಾಗಬೇಕು,
ಅಭ್ಯಾಸ ಆರಂಭವಾಗಲು 'ಶಕ್ತಿ'ಬೇಕು.
ಬೆಂಕಿಕಡ್ಡಿ ಸುಮ್ಮನೆ ಹೊತ್ತಿಕೊಳ್ಳುವುದಿಲ್ಲ,
ಕಡ್ಡಿ ಗೀರಲು ಸ್ವಲ್ಪ 'ಶಕ್ತಿ' ವ್ಯಯಿಸಬೇಕು.
ಯಾವುದೇ ಕೆಲಸವಾದರೂ ಸರಿಯೇ,
ಹಲವು 'ಹೆಜ್ಜೆ'ಗಳ ಸವೆಸಬೇಕು.
ಕುಳಿತಲ್ಲೇ ಎಲ್ಲವು ಆಗಬೇಕೆನ್ನುವುದು,
ಮೂರ್ಖತನವಲ್ಲದೆ ಮತ್ತೇನು?.
'ಸಣ್ಣ ಸಣ್ಣ ಹೆಜ್ಜೆ'ಗಳಿಗೆ ಬೆಲೆಕೊಡು,
ನಾಳೆಯ 'ದೊಡ್ಡ ಸಾಧನೆ'ಗೆ ಸಿದ್ಧವಾಗು.
ಸಣ್ಣ ಸಣ್ಣ ಹೆಜ್ಜೆಯಿಡುವುದ 'ಪ್ರೀತಿಸು',
'ಬೆವರ ಹನಿ'ಯಲ್ಲಿ 'ಬೆಳವಣಿಗೆ'ಯ ಸಾಧಿಸು.
'ಪ್ರಾರಂಭದ ಹೆಜ್ಜೆ'ಗಳ 'ಸುಲಭ'ವಾಗಿಸು,
'ಅಭ್ಯಾಸ, ಹವ್ಯಾಸ'ವಾಗಿ ಬದಲಿಸು.
ಗುರಿ ಮನದಲ್ಲಿರಲಿ 'ಪ್ರಕ್ರಿಯೆಯ ಪ್ರೀತಿಸು',
'ನಿರಂತರತೆ'ಯ ಬೆಳಕಲ್ಲಿ 'ಜೀವನವ ಅರಳಿಸು'.

No comments:
Post a Comment