Friday, February 20, 2026

ಮೌನ ರಾಗ

ಕಂಡೆನೆಂದು ನಡೆವಾಗ ಕಾನನದಲ್ಲಿ,

ನಿನ್ನ ರೂಪ ಹೃದಯದಲ್ಲಿ,


ಛಾಪು ಮೂಡಿದೆ ರೂಪ ಮನದಲ್ಲಿ,

ರೂಪ ತುಂಬಾ ಅಪರೂಪ ಇಲ್ಲಿ.

 

ಹೃದಯದ ಮೂಲೆಯಲ್ಲಿ ಧ್ವನಿಸುತ್ತಿದೆ ಮೌನ ರಾಗ,

ಬೇಡ ಬೇಡವೆಂದರೂ ನಿದಿರೆಯ ಓಡಿಸುತ್ತಿದೆ ವಿರಾಗ,

ಹಕ್ಕಿಗಳಿಂಚರ ಚಿಲಿಪಿಲಿ ಹರಡಿದೆ ಪ್ರಕೃತಿ ಗಾನ,

ಏರುತ್ತಿದೆ ಮೂಡಣದ ಸೂರ್ಯೋದಯದ ತೆರೆ.

 

ತಬ್ಬಿ ಹಿಡಿದ ಚಳಿ ಬಿಡಲೊಲ್ಲದೆ ಬಾಹುಗಳಲ್ಲಿ ಅಪ್ಪಿದೆ,

ದೇವನ ಚೈತನ್ಯದ ಕಿರಣವೊಂದು ಹೃದಯವ ತಾಕಿದೆ,

ಅಣು ಅಣುವಿನಲಿ ಹೊಕ್ಕು ವಿಶ್ವರೂಪವ ತೋರಿದೆ,

 ಶಕ್ತಿಯ ತುಂಬಿ ಹೃದಯದಲಿ ಅನಂತ ಸಾಗರವಾಗಿದೆ. 

No comments:

Post a Comment

ಮೌನ ರಾಗ

ಕಂಡೆನೆಂದು ನಡೆವಾಗ ಕಾನನದಲ್ಲಿ , ನಿನ್ನ ರೂಪ ಹೃದಯದಲ್ಲಿ , ಛಾಪು ಮೂಡಿದೆ ಆ ರೂಪ ಮನದಲ್ಲಿ , ಆ ರೂಪ ತುಂಬಾ ಅಪರೂಪ ಇಲ್ಲಿ .   ಹೃದಯದ ಮೂಲೆ...